ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿ ಸಾಂಪ್ರದಾಯಿಕ ಕಸೂತಿ ಕುಸುರಿಯನ್ನು ಜನಪದರು ತಯಾರಿಸುತ್ತಿದ್ದಾರೆ. ಅತ್ಯಂತ ಸಂಕೀರ್ಣವಾದ ಕಸೂತಿ ಕುಸುರಿ ಕೆಲಸದಲ್ಲಿ ಕೆಲವೊಮ್ಮೆ ೫೦೦೦ದಷ್ಟು ಹೊಲಿಗೆಗಳಿದ್ದು ಇಲ್‍ಕಲ್ ಸಾರಿ, ಅಂಗಿ, ರವಿಕೆ, ಕುರ್ತಗಳಿಗೆ ಬಳಸುತ್ತಿದ್ದರು. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ()ವು ಭೌಗೋಳಿಕ ಲಕ್ಷಣಗಳ(ಜಿಐ) ರಕ್ಷಣೆಯನ್ನು ಹೊಂದಿದೆ ಮತ್ತು KHDCಯನ್ನು ಆಧರಿಸಿ ಕಸೂತಿಗೆ ಬೌದ್ಧಿಕ ಆಸ್ತಿ ಹಕ್ಕು ಒದಗಿದೆ. == ಇತಿಹಾಸ == ಕಸೂತಿ ಎಂಬ ಪದವು ಚಾಲುಕ್ಯರ ಕಾಲಕ್ಕೂ ಹಿಂದೆಯೇ ಇತ್ತು ಎಂಬ ಇತಿಹಾಸವಿದೆ. ಕಸೂತಿ ಎಂಬ ಪದವು ಕೈ+ ಸೂತಿ/ಸುತ್ತು ಈ ಎರಡು ಪದಗಳನ್ನು ಹೊಂದಿದೆ. ಅರಿವೆಯ ಮೇಲೆ ಕೈಯಿಂದ ದಾರವನ್ನು ಸುತ್ತುವುದು ಮೇಣ್ ಹೆಣೆಯುವುದನ್ನು ಕಸೂತಿ ಎನ್ನಬಹುದು. ಸೂತಿ ಎಂದರೆ ಹತ್ತಿ ಎಂಬ ಅರ್ಥವನ್ನು ಹೊಂದಿದೆ. ೧೭ನೆಯ ಶತಮಾನದಲ್ಲಿ ಮೈಸೂರಿನ ಅರಸು ಮನೆತನದವರು ಮಹಿಳೆಯರು ತಯಾರಿಸುವು ೬೪ ಕೆಲಗಳಲ್ಲಿ ಕಸೂತಿ ಕುಸುರಿಯೂ ಸೇರಿತ್ತು. ಕಸೂತಿ ಕುಸುರಿಯನ್ನು ಇಳಕಲ್ ಸೀರೆ ಹಾಗೂ ಕುಪ್ಪಸಗಳ ಮೇಲೆ ಹೆಣೆಯಲಾಗುತ್ತಿತ್ತು. === ಕರ್ನಾಟಕದ ಕಸೂತಿಯಲ್ಲಿ ಬಳಸಲಾಗುವ ಹೆಣಿಗೆಗಳು === ಗವಂತಿ ನೇಗಿ ಮುರಗಿ ಮೆಂಥಿ === ಸಾಂಪ್ರದಾಯಿಕ ಕಸೂತಿಯಲ್ಲಿ ಬಳಸಲಾಗುವ ಬಣ್ಣಗಳು === ಸಾಮಾನ್ಯವಾಗಿ ಕೇಸರಿ, ಹಸಿರು, ನೇರಳೆ ಮತ್ತು ಕೆಂಪು ಬಣ್ಣಗಳನ್ನು ಬಳಸುತ್ತಾರೆ. ಬಣ್ಣಗಳ ಸಂಯೋಜನೆ: ಕೆಂಪು, ಕೇಸರಿ ಮತ್ತು ನೇರಳೆ ಹಾಗೂ ಕೆಂಪು, ಕೇಸರಿ ಮತ್ತು ಹಸಿರು ಬಿಳಿ ಬಣ್ಣವನ್ನು ಕಪ್ಪು ಅಥವಾ ಕಂದು ಬಣ್ಣದ ಬಟ್ಟೆಗಳ ಮೇಲೆ ಬಳಸಲಾಗುತ್ತದೆ. ನೀಲಿ, ಹಳದಿ ಬಣ್ಣಗಳನ್ನು ವಿರಳವಾಗಿ ಬಳಸುತ್ತಾರೆ. , ಅತೀ ವಿರಳವಾಗಿ ಬಳಸುತ್ತಾರೆ. [೧] == ಪ್ರಸ್ತುತ ಸನ್ನಿವೇಶ == ಕಸೂತಿ ಸಂಪ್ರದಾಯವು ತನ್ನ ವ್ಯಾಪ್ತಿಯನ್ನು ಮೀರಿ ಈಗ ಮೈಸೂರು ಸ್ಯಾರಿಗಳಲ್ಲೂ ಬಳಕೆಯಾಗುತ್ತಿದೆ. == ನೋಡಿ == ಕಸೂತಿ:[೨] == ಉಲ್ಲೇಖ ==